ಸ್ನೇಹದ ಕಡಲಲ್ಲಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಎಸ್ ಎಂ ಜೋ ಸೈಮನ್ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜಿ.ಗೋವಿಂದ್, ಟಿ.ಎನ್.ವೆಂಕಟೇಶ್ ಹಾಗೂ ಜೆ.ಜಿ.ಕೃಷ್ಣ (ಜಿ.ವಿ.ಕೆ.ಪ್ರೊಡಕ್ಷನ್ಸ್). ಚಿತ್ರದಲ್ಲಿ ಅರ್ಜುನ್ ಸರ್ಜಾ, ಮಾಲಾಶ್ರೀ ಹಾಗೂ ಸುನಿಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರದ ಶೀರ್ಷಿಕೆ ಶುಭಮಂಗಳ (೧೯೭೫) ಚಿತ್ರದ "ಸ್ನೇಹದ ಕಡಲಲ್ಲಿ" ಜನಪ್ರಿಯ ಹಾಡಿನಿಂದ ಆಯ್ದುಕೊಳ್ಳಲಾಗಿದೆ. ಚಿತ್ರದ ಸಂಗೀತವನ್ನು ರಾಜ್-ಕೋಟಿ ಸಂಯೋಜಿಸಿದ್ದರು ಮತ್ತು ಆಡಿಯೋ ಲಹರಿ ಸಂಗೀತ ಬ್ಯಾನರ್ ಬಿಡುಗಡೆಗೊಳಿಸಲಾಯಿತು. == ಪಾತ್ರ == ಅರ್ಜುನ್ ಸರ್ಜಾ ಮಾಲಾಶ್ರೀ ಸುನಿಲ್ ರಾಕ್ ಲೈನ್ ವೆಂಕಟೇಶ್ ಜಿ.ಕೆ.ಗೋವಿಂದ ರಾವ್ ಗಿರಿಜಾ ಲೋಕೇಶ್ ರೇಖಾ ದಾಸ್ ಜೋ ಸೈಮನ್ ಶನಿ ಮಹದೇವಪ್ಪ